ಭಾನುವಾರ, ಮೇ 10, 2015

ತಿಗಳಾರಿ ಭಾಷೆ (ತಿಗಳಾರಿ ಪೇಸಿ ) Tigalari Language

ತಿಗಳಾರಿ ಭಾಷೆ (ತಿಗಳಾರಿ ಪೇಸಿ ) 
திகலாரி பெசி, 
तिगलारी  भाषा ,
తిగాళారి భాషలు ,
તીગલારી ,
റ്റിഗലാരി , 
Tigalari Language 


ಕನ್ನಡ ಭಾಷೆ (kannada language )
ತಿಗಳಾರಿ  ಭಾಷೆಯು ದಕ್ಷಿಣ ಭಾರತ ದೇಶದ ಅತ್ಯಂತ ಪ್ರಾಚಿನ ಭಾಷೆಯಾದ ದ್ರಾವಿಡ ಭಾಷೆಯ ಉಪ ಭಾಷೆಯಾಗಿದೆ.      ಈ ತಿಗಳಾರಿ ಭಾಷೆಯು ಈಗಿನ ಕನ್ನಡ ಭಾಷೆ , ತಮಿಳು ಭಾಷೆ,ತೆಲುಗು ಭಾಷೆ ಹಾಗೂ ಮಲಯಾಳಂ ಭಾಷೆಗೆ ತೀರ ನಿಕಟ ಸಂಬಂಧವಿದೆ.
ಈ ತಿಗಳಾರಿ ಭಾಷೆಯನ್ನು ಅಂದಿನ ಕಾಲದ ತಿಗಳ ಜನಾಂಗದ (ವಹ್ನಿಕುಲ ಕ್ಷತ್ರಿಯರು ) ರಾಜರು , ತಿಗಳ ಜನಾಂಗದ ಸಾಮಂತರು ,ತಿಗಳ ಜನಾಂಗದ ಪಂಡಿತರು ರಹಸ್ಯವಾಗಿ ಅವರಿಗೆ ಅರ್ಥವಾಗುವಂತೆ ಉಪಯೊಗಿಸುತ್ತಿದ್ದರು.
ಅನ್ಯ ಭಾಷೆಗಳ ಒತ್ತಡದಿಂದ ತಿಗಳ ಜನಾಂಗದ ಜನರು, ತಮ್ಮ ಮಾತೃ ಭಾಷೆಯಾದ ತಿಗಳಾರಿ ಭಾಷೆಯ ಲಿಪಿಯನ್ನು ಉಪಯೋಗಿಸುವುದನ್ನು ಮರೆತು ಬಿಟ್ಟಿರಬಹುದು .
ನಾವು ಈಗಲೂ ಈ ತಿಗಳಾರಿ ಭಾಷೆಯನ್ನು ಮಾತನಾಡುವ,ತಿಗಳ ಜನಾಂಗದವರನ್ನು (ವಹ್ನಿಕುಲ ಕ್ಷತ್ರಿಯರು ) ಪ್ರಮುಕವಾಗಿ ಈ ಭಾಗಗಳಲ್ಲಿ ಕಾಣಬಹುದು .
ಬೆಂಗಳೂರು ನಗರ ,ಬೆಂಗಳೂರು ಗ್ರಾಮಂತರ ,  ತಿಗಳರಪೇಟೆ, ಜಕ್ಕಸಂದ್ರ,ಹೊಸಕೋಟೆ , ಕೋಲಾರ ,ಮಾಲೂರು ,ಹೊಸೂರು ,ದೇವನಹಳ್ಳಿ ,ಆನೇಕಲ್ ,ವೇಮಗಲ್ ,ಬಂಗಾರಪೇಟೆ ,ಕನಕಪುರ ,ಹಾರೋಹಳ್ಳಿ ,ದೊಡ್ಡಬಳ್ಳಾಪುರ ,ಚಿಕ್ಕಬಳ್ಳಾಪುರ , ಮಾಸ್ತಿ ,ಅತ್ತಿಬೆಲೆ ,ಬೇಗೂರು ,ಜಿಗಣಿ ,ಸರ್ಜಾಪುರ ,ಮಾಯಸಂದ್ರ ,, ,ದೊಮ್ಮಸಂದ್ರ ,ಈಜಿಪುರ ,ನೀಲಸಂದ್ರ, ಯಲಹಂಕ ,ರಾಂಪುರ ,ಬೆಳತೂರು ,ಜೆ.ಪಿ.ನಗರ ,ಬಿಳೆಕಹಳ್ಳಿ ,ಮಲ್ಲೇಶ್ವರಂ ,ಹೆಬ್ಬಾಳ ,ಮತ್ತಿಕೆರೆ ,ಯಶವಂತಪುರ ,ಗೋಕುಲ ,ಹುಳಿಮಾವು ,ಪುಟ್ಟೇನಹಳ್ಳಿ ,ಯಲಚೇನಹಳ್ಳಿ ,ಮುರುಗೆಶಪಾಳ್ಯ ,ಸಿದ್ದಾಪುರ ,ಚುಂಚಗಟ್ಟ ,ವರ್ತೂರು,ಕುಂಬಳ ಹಳ್ಳಿ ,ವಿಜಿಪುರ ,ಬೈಚಾಪುರ , ,ಕತ್ತಾಲಿಪಾಳ್ಯ,  ,ಬೆಳ್ಳಂದೂರು ,ರಾಮಗೊಂಡನಹಳ್ಳಿ ,ಸಿದ್ದಾಪುರ ,ಕಲಾಸಿಪಾಳ್ಯ ,,,ದೂಪನಹಳ್ಳಿ,ಹೆನ್ನಾಗರ,ಚಂದಾಪುರ ,ಮಾಸ್ತೆನಹಳ್ಳಿ ,ಹುಸ್ಕೂರು ,ಗಟ್ಟಹಳ್ಳಿ,ವೀರಸಂದ್ರ ,ಹೆಬ್ಬಗೋಡಿ ,ದೊಡ್ದತೋಗೂರು,ಇಮ್ಮಡಿಹಳ್ಳಿ ,ಶಾಂತಿನಗರ ,ಮಡಿವಾಳ ,ಶ್ರೀನಿವಾಗಿಲು ,ಸಾರಕ್ಕಿ ,ಜರಗನಹಳ್ಳಿ , ವೆಂಕಟಾಪುರ ,ಕೋರಮಂಗಲ.ತಿರುಮಗೊಂಡನಹಳ್ಳಿ ,ಶ್ರೀ ರಂಗ ಪಟ್ಟಣದ ಗಂಜಾಂ ,ಹಾಗೂ   ಕರ್ನಾಟಕ ರಾಜ್ಯದ ಇನ್ನೂ ಸಾವಿರಕ್ಕೂ ಹೆಚ್ಚಿನ ಊರುಗಳಲ್ಲಿ ,ಮತ್ತು ತಮಿಳುನಾಡು ರಾಜ್ಯದ ಧರ್ಮಪುರಿ ,ಕ್ರಿಷ್ಣಗಿರಿ ಜಿಲ್ಲೆಗಳಲ್ಲಿ  ಈ ತಿಗಳಾರಿ  ಭಾಷೆಯನ್ನು ಮಾತನಾಡುವ ತಿಗಳ (ವಹ್ನಿಕುಲಕ್ಷತ್ರಿಯರು )  ಜನಾಂಗದವರನ್ನು ಕಾಣಬಹುದು . 

ತಿಗಳ ಕ್ಷತ್ರಿಯರ ಇತಿಹಾಸ (ವಹ್ನಿಕುಲ ಕ್ಷತ್ರಿಯರು)
ಬೆಂಗಳೂರಿನ ಮೂಲ ನಿವಾಸಿಗಳು ಈ ಜನಾಂಗದವರು. ಇವರ ಮಾತೃ  ಭಾಷೆ ತಿಗಳಾರಿ  ಭಾಷೆ , ಈ ಜನಾಂಗದ ಮುಖ್ಯ ಉತ್ಸವ ,ಶ್ರೀ ಆಧಿಶಕ್ತಿ ದ್ರೌಪದಮ್ಮ ಕರಗ ಮಹೋತ್ಸವ ,  ಈ ಜನಾಂಗದವರು ಪಲ್ಲವ ರಾಜ ಮನೆತನ ಮತ್ತು ಗಂಗಾ ರಾಜ ಮನೆತನಕ್ಕೆ ಸೇರಿದವಾರಿಗಿರುತ್ತಾರೆ .  ವಹ್ನಿಕುಲ ಕ್ಷತ್ರಿಯ ತಿಗಳ  ಜನಾಂಗದ ಆರಾಧ್ಯ ದೈವ  ಶ್ರೀ ಆಧಿಶಕ್ತಿದ್ರೌಪದಮ್ಮ ಶ್ರೀ ಧರ್ಮರಾಯಸ್ವಾಮಿ ,ಶ್ರೀ ಮುನೇಶ್ವರ ಸ್ವಾಮಿ,ಶ್ರೀ ವೆಂಕಟರಮಣ ಸ್ವಾಮಿ  ಹಾಗೂ ಶ್ರೀ ರೇಣುಕಾ ಯಲ್ಲಮ್ಮ ದೇವಿ, ಮುತ್ಯಾಲಮ್ಮ ದೇವಿಯನ್ನು  ಪೂಜಿಸುತ್ತಾರೆ.    ವಹ್ನಿಕುಲ ಕ್ಷತ್ರಿಯರು ಅಂದಾವಾದ ಹೂ -ಹಣ್ಣು -ತರಕಾರಿ  ತೋಟಗಳನ್ನು ಮಾಡುವುದರಲ್ಲಿ ನೈಪುಣ್ಯತೆಯನ್ನು ಹೊಂದಿರುತ್ತಾರೆ . ವಹ್ನಿಕುಲ ಕ್ಷತ್ರಿಯರು ಸರಾಗವಾಗಿ ಕನ್ನಡ,ತಮಿಳು ,ತೆಲುಗು ಭಾಷೆಯನ್ನು ಮಾತನಾಡುತ್ತಾರೆ . ಕಾರಣ ತಮ್ಮ ಮಾತೃ ಭಾಷೆಯಾದ ತಿಗಳಾರಿ  ಭಾಷೆಯು ಈ ಮೂರು ಭಾಷೆಗಳ ಸಮ್ಮಿಶ್ರಣವಾಗಿದೆ . 
ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವನ್ನು ಇವರು ಹೊಂದಿರುತ್ತಾರೆ . ಇವರು ತಮ್ಮ  ಮನೆಯಲ್ಲಿ ತಿಗಳಾರಿ ಭಾಷೆಯನ್ನು ಹೊರಗಿನ ಪ್ರಪಂಚದೊಡನೆ ಹೆಚ್ಚಾಗಿ ಕನ್ನಡ ಭಾಷೆಯನ್ನು ಉಪಯೋಗಿಸುತ್ತಾರೆ . ಇವರು ತಮ್ಮ ಜನಾಂಗದ ಮುಖ್ಯಸ್ತನಿಗೆ "ಗೌಡರು" ಎಂದು ಕರೆಯುತ್ತಾರೆ . ಗೌಡ ಎನ್ನುವ ಪದವನ್ನು ಮೊಟ್ಟ ಮೊದಲು ಉಪಯೋಗಿಸಿದವರು ಈ ತಿಗಳಗೌಡ ಜನಾಂಗವೇ ಆಗಿರುತ್ತದೆ .    ವಹ್ನಿಕುಲ ಕ್ಷತ್ರಿಯರು ಶ್ರಮ ಜೀವಿಗಳು ಮತ್ತು ಸ್ನೇಹ ಜೀವಿಗಳಾಗಿರುತ್ತಾರೆ. ಬೆಂಗಳೂರಿನ ನಿರ್ಮಾತೃ "ಕೆಂಪೇಗೌಡರು"   ವಹ್ನಿಕುಲ ಕ್ಷತ್ರಿಯ   ಜನಾಂಗಕ್ಕೆ ಸೇರುವಾ " ಧರ್ಮರಾಯ ಒಕ್ಕಲಿಗ ಜಾತಿಗೆ"  ಸೇರಿದವರಾಗಿರುತ್ತಾರೆ.  ಈ ಜನಾಂಗದವರು ಕುಸ್ತಿ ,ಕತ್ತಿ  ವರಸೆ ,ಕೋಲು ವರಸೆ ಮುಂತಾದ ಗ್ರಾಮೀಣ ಕ್ರೀಡೆಗಳಲ್ಲಿ  ಹೆಚ್ಚಿನ  ನೈಪುಣ್ಯತೆಯನ್ನು ಹೊಂದಿರುತ್ತಾರೆ.
 ಕರ್ನಾಟಕ ರಾಜ್ಯದಲ್ಲಿ ತಿಗಳ ಜನಾಂಗದವರು ಸುಮಾರು ೫೦ ಐವತ್ತು ಲಕ್ಷ ಜನಸಂಖ್ಯೆಯನ್ನು ಹೊಂದಿರುತ್ತಾರೆ.

                      


                                   

                                         ತಿಗಳಾರಿ ಭಾಷೆಯ ನುಡಿಮುತ್ತುಗಳು                     ಜೆ.  ಜೆ . ನಂಜಪ್ಪ                                                                                    
                                          

                                                                                     

1 ಕಾಮೆಂಟ್‌: